ನಿನ್ನೆ (೨೩.೧.೨೦೦೮) ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ತಿರುಪತಿ ವಿಶ್ವವಿದ್ಯಾನಿಲಯ ಅಲ್ಲಿನ ಪ್ರೊಫೆಸರ್ ಒಬ್ಬರಿಗೆ ಶಿಕ್ಷೆ ವಿಧಿಸಿದ್ದು ಓದಿದೆ. ಅಪರಾಧ: ಕೃತಿಚೌರ್ಯ. ವಿಜ್ಞಾನ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಕೃತಿಚೌರ್ಯದಷ್ಟು ಹೀನ ಕೃತ್ಯ ಇನ್ನೊಂದಿಲ್ಲ. ಇವೆರಡೂ ಕ್ಷೇತ್ರಗಳೂ ಬೌದ್ಧಿಕ ಚಟುವಟಿಕೆಗೆ ಮೀಸಲು. ಇಲ್ಲಿ ನಿಮ್ಮ ಚಿಂತನೆಗಳು ಮೂರ್ತ ರೂಪ ಪಡೆಯುತ್ತವೆ. ವಿಜ್ಞಾನ ಕ್ಷೇತ್ರದಲ್ಲಂತೂ, ವೈಯಕ್ತಿಕ ಚಿಂತನೆಗಳು ಪ್ರಯೋಗ, ಪರಾಮರ್ಶೆಗಳ ಒರೆಯಲ್ಲಿ ಪುಟವಿಟ್ಟು ಬರುತ್ತವೆ. ಈ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿವೆ. ಇವುಗಳೆಲ್ಲವನ್ನೂ ಕೃತಿಚೌರ್ಯವಲ್ಲ ಎಂದು ವೈಜ್ಞಾನಿಕ ಜಗತ್ತು ನಂಬುತ್ತದೆ. ಏಕೆಂದರೆ, ಪ್ರಕಟಣೆಯಾಗುವ ಮುನ್ನ ಈ ಎಲ್ಲ ಪ್ರಬಂಧಗಳೂ ವಿಜ್ಞಾನ ಜಗತ್ತಿಗೇ ವಿಶಿಷ್ಟವೆನ್ನಿಸಿದ ಪೀರ್ ರಿವ್ಯೂ (ಸೋದರ ಪರಾಮರ್ಶೆ)ಯ ಶೋಧಕದಿಂದ ಹೊರ ಬರಬೇಕು. ಪ್ರಬಂಧಗಳನ್ನು ಅವುಗಳಲ್ಲಿನ ವೈಜ್ಞಾನಿಕ ಅಡಕಗಳ ಸತ್ಯಾಸತ್ಯತೆಯ ಪರಿಶೀಲನೆಗೆಂದು ಅದೇ ಕ್ಷೇತ್ರದಲ್ಲಿ ಸಂಶೋಧನೆಗೈಯುತ್ತಿರುವ ಇನ್ನೂ ಹಲವರಿಗೆ ತಲುಪಿಸಲಾಗುತ್ತದೆ. ಲೇಖಕ ಯಾರೆಂಬುದು ಈ ಪರಾಮರ್ಶಕರಿಗೆ ತಿಳಿದಿದ್ದರೂ, ಪರಾಮರ್ಶಕರು ಯಾರೆಂಬುದು ಲೇಖಕರಿಗೆ ತಿಳಿದಿರುವುದಿಲ್ಲ. ಪರಾಮರ್ಶಕರು, ಲೇಖನದಲ್ಲಿರುವ ಪ್ರಯೋಗಗಳು,ಫಲಿತಾಂಶಗಳು ಹಾಗೂ ಅವುಗಳಿಂದ ಪಡೆದ ತೀರ್ಮಾನವೆಲ್ಲವೂ ಸತ್ಯ ಎಂದು ಮನವರಿಕೆ ಮಾಡಿಕೊಂಡು, ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸುತ್ತಾರೆ. ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಾದ ಅನಂತರ ಕೃತಿ ಪ್ರಕಟವಾಗುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತದೆ.
ತಿರುಪತಿಯ ಪ್ರೊಫೆಸರ್‌ರವರು ಇದುವರೆವಿಗೂ ಪ್ರಕಟಿಸಿರುವ ೭೫ ಪ್ರಬಂಧಗಳೂ ಕೃತಿಚೌರ್ಯವಿರಬಹುದು ಎಂದು ಗುಮಾನಿಸಲಾಗಿದೆ. ಗುಮಾನಿಗೆ ಕಾರಣ: ಅವರು ಪ್ರಬಂಧಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ನಡೆಸುವ ಸವಲತ್ತು ಅವರ ವಿಶ್ವವಿದ್ಯಾನಿಲಯದಲ್ಲಿ ಇರಲೇ ಇಲ್ಲ! ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆಗಳನ್ನು ಸತ್ಯಾಸತ್ಯತೆಯ ಪರೀಕ್ಷೆ ಎನ್ನಲಾಗುತ್ತದೆ. ಇಲ್ಲಿ ಭಾವುಕತೆಗೆ, ಕಲ್ಪನಾವಿಹಾರಕ್ಕೆ ಎಡೆ ಇಲ್ಲ. ಆದರೂ, ಕೇವಲ ಕಾಲ್ಪನಿಕ ಸಂಶೋಧನೆಗಳನ್ನು ನಡೆಸಿಯೇ ಇಷ್ಟು ವರುಷ ವಿದ್ವತ್ ಜಗತ್ತಿನಲ್ಲಿ ಬದುಕುಳಿದ ಈ ಚಾಣಾಕ್ಷ ಮತಿಯನ್ನು ಹೊಗಳಬೇಕೇ, ತೆಗಳಬೇಕೇ?
ಭಾರತದಲ್ಲಿ ಕೃತಿಚೌರ್ಯದ ಸಂಗತಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರುಷ ಚೆನ್ನೈನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಫಿಸಿಕ್ಸ್ ಸಂಶೋಧಕನೊಬ್ಬ, ಹತ್ತು ತಿಂಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧವೊಂದನ್ನು ಸಾರಾಸಗಟು (ಪದಕ್ಕೆ ಪದ) ನಕಲು ಮಾಡಿ, ಅದರ ಶೀರ್ಷಿಕೆ ಬದಲಿಸಿ ಪ್ರಕಟಿಸಿದ್ದ. ವಿಷಯ ಬಯಲಾದಾಗ, ಅದು ತನ್ನದೇ ಎಂದು ವಾದಿಸಿಯೂ ಇದ್ದ.
ಹೀಗೆ ವೈಜ್ಞಾನಿಕ ಜಗತ್ತಿನ ಆಧಾರಸ್ತಂಭವೆನ್ನಿಸಿದ ವಿಶ್ವಾಸದ ಬುಡಕ್ಕೇ ಕೊಡಲಿಯೇಟು ನೀಡುವವರಿಗೆ ನೀಡುವ ಶಿಕ್ಷೆಯಾದರೂ ಏನು? ಇನ್ನು ಮುಂದೆ ಅವರು ಸಂಶೋಧನೆ ನಡೆಸಬಾರದು, ಅಷ್ಟೆ. ಎಂದಿನಂತೆ ಪಾಠ ಹೇಳಬಹುದು. ಕಲಿಸುವರೋ, ಕದಿಯಲು ತಿಳಿಸುವರೋ ಯಾರು ಬಲ್ಲರು.
Saturday, February 23, 2008
Thursday, May 10, 2007
ಗಂಡ-ಹೆಂಡತಿ
ಈ ಬಗ್ಗೆ ನಾನು ಎಂದೂ ಗಂಭೀರವಾಗಿ ಚಿಂತಿಸಿರಲಿಲ್ಲ. ಈಗಲೂ ಅಷ್ಟು ಗಹನವಾಗಿ ಚಿಂತಿಸುತ್ತಿಲ್ಲವೇನೋ? ಆದರೆ ಈ ಬ್ಲಾಗ್ ಬರೆಯಲು ಕಾರಣ, ಮೊನ್ನೆ ಮಂಜುವಿನ ಜೊತೆಗೆ ನಡೆದ ಸಂವಾದ ಹಾಗೂ ಸಂಜೆ ರಜೆಗೆಂದು ಊರಿಗೆ ತೆರಳಿರುವ ಮಡದಿ ಫೋನಾಯಿಸಿ, "ಐ ಮಿಸ್ ಯು" ಎಂದದ್ದು.
ಹಾಗಂತ ನಮ್ಮ ದಾಂಪತ್ಯವೇನೂ ಇತ್ತೀಚಿನದಲ್ಲ. ೨೩ ವರುಷಗಳ ಹಿಂದೆಯೇ ಒಬ್ಬರಿನ್ನೊಬ್ಬರ ಜೊತೆ ಇಡೀ ಜೀವನ ಸವೆಸೋಣ ಎಂದು ತೀರ್ಮಾನಿಸಿದ್ದೆವು. ಆಗ ಈ ಬಗ್ಗೆ ಏನೋ ಹೊಸ ಖುಷಿ ಇತ್ತು. ಕಛೇರಿ ರಾಜಕೀಯ, ಸೈಟ್ ಬೆಲೆ ಅತಿ ಹೆಚ್ಚಾಗಿ ಹೋದ ಚಿಂತೆ, ಮಕ್ಕಳು ಶಾಲೆಯಿಂದ ಬಂದ ಅನಂತರ ಸರಿಯಾಗ ಊಟ ಮಾಡದ ಬಗ್ಗೆ ಆತಂಕ, ಪ್ರತಿದಿನವೂ ನೀರು ಸರಬರಾಜು ಆಗುತ್ತದೆ ಎಂದು ನಿತ್ಯ ಪತ್ರಿಕೆಯಲ್ಲಿ ಓದಿದ ಮೇಲೂ ನಲ್ಲಿಯ ಮುಂದೆ ತಪಸ್ಸು ಮಾಡಬೇಕಾದ ಅನಿವಾರ್ಯತೆ, ಇನ್‌ಕಂಟ್ಯಾಕ್ಸ್ ಹೆಚ್ಚಾದ ಗತಿಯಲ್ಲಿಯೇ ಇಂಕ್ರಿಮೆಂಟೂ ಏಕೆ ಹೆಚ್ಚಾಗುವುದಿಲ್ಲವೋ? ಇಂಕ್ರಿಮೆಂಟು ಹೆಚ್ಚಾದ ಗತಿಗಿಂತ ತರಕಾರಿಯ ಬೆಲೆ ಹೆಚ್ಚುವುದು ಯಾವಾಗಲೂ ತೀವ್ರವೇಕೋ? ಎಂಬ ಉತ್ತರವೇ ಇರದ ಪ್ರಶ್ನೆಗಳು,ಇತ್ಯಾದಿಗಳ ನಡುವೆ ನಾನು-ನೀನು ಎನ್ನುವ ಸಂಬಂಧವನ್ನು ಕುರಿತು ಮಾತನಾಡುವುದೇ ಮರೆತು ಹೋಗಿತ್ತೆನ್ನಿಸಿತು, ಮೊನ್ನೆ ನನ್ನವಳ ಕರೆ ಬರುವವರೆಗೆ.
ಇಪ್ಪತ್ತನಾಲ್ಕು ವರುಷಗಳ ಹಿಂದೆ ಸಾವಿರ ಮೈಲು ದೂರದಲ್ಲಿದ್ದಾಗ ಇದ್ದಷ್ಟು ಆತ್ಮೀಯತೆ ಈಗ ಕಡಿಮೆ ಆಗಿದೆಯೇನೋ? Familiarity breeds contempt ಅಂತಾರಲ್ಲ. ಸಹವಾಸದಿಂದ ಸಂಬಂಧಗಳು ಕೊಳೆಯುತ್ತವೆಯೋ? ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಉಂಟಾಗುತ್ತಿದ್ದ ವಿರಸ, ಸರಸವನ್ನು ಮರೆಸುತ್ತಿತ್ತೇನೋ?
ಇಪ್ಪತ್ತು ವರುಷದ ಸಹವಾಸದ ಬಗ್ಗೆಯೇ ಇಷ್ಟು ತೀವ್ರವಾಗಿ ಆಲೋಚಿಸುವವನಿಗೆ ಎಪ್ಪತ್ತು ವರುಷದ ಸಹವಾಸ ಮಾಡಿದವರ ಬಗ್ಗೆ ಆಲೋಚಿಸುವುದು ತಿಳಿದೀತೇ? ನಮ್ಮ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದವನಿಗೆ ಅಪ್ಪನ ಮರಣ, ಎದ್ದು ಎದೆಗೊದೆದದ್ದು ನಿಜ. ಎಪ್ಪತ್ತು ವರುಷಗಳ ಕಾಲ ತನ್ನ ಜೊತೆಗಿದ್ದ ಒಂದು ಜೀವ ಮರೆಯಾಗಿ, ಮಣ್ಣಾಗಿ ಹೋಗಿದ್ದನ್ನು ತಾಯಿ ತಡೆದುಕೊಳ್ಳಬಹುದೇ? ಇಷ್ಟು ದೀರ್ಘ ಕಾಲ ಜೊತೆಗಿದ್ದ ಆಕೆಯ ಮನಸ್ಸಿನಲ್ಲಿ ಎಂತಹ ಭಾವನೆಗಳು ಇರಬಹುದು ಎನ್ನುವ ಪ್ರಶ್ನೆಗಳು ಅಪ್ಪನ ಚಿತೆಗೆ ಬೆಂಕಿಯಿಡುವಾಗಲೂ ಕಾಡುತ್ತಿತ್ತು.
ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ನಿತ್ಯವೂ ಊಟ ಮಾಡುವಾಗ, ಅಥವಾ ಮಗ ಆಟವಾಡುವಾಗಲೂ ಅದರಲ್ಲಿ ತಂದೆಯ ಛಾಪನ್ನು ಅಮ್ಮ ಕಾಣುತ್ತಿದ್ದಳು. ನಿಜ. ಮೊಮ್ಮಗನಲ್ಲಿ ತಾತನ ಕಾಲು ಭಾಗ ವಂಶವಾಹಿಗಳು ಇರುತ್ತವೆ ಎನ್ನುವುದು ವಿಜ್ಞಾನ ಕಲಿತ ನನಗೆ ತಿಳಿಯದ್ದಲ್ಲ. ಆದರೆ ಅಪ್ಪ ಇರುವವರೆವಿಗೂ ಅಮ್ಮನಿಗೆ ಕಾಣದ ಈ ಸಾಮ್ಯ ಈಗ ಆ ಒಂಟಿತನದ ಕಾರಣವಾಗಿ ಎದ್ದು ತೋರುತ್ತಿತ್ತು. ನಾವೆಲ್ಲ ಬೆಳೆಯುತ್ತಿದ್ದಂತೆ ಅಪ್ಪ-ಅಮ್ಮನ ನಡುವೆ ತೀವ್ರವಾಗಿ ಕಾಣುತ್ತಿದ್ದ ವಿರಸ ಎಲ್ಲಿ ಹೋಯಿತೋ ತಿಳಿಯಲಿಲ್ಲ. ಇಡ್ಲಿಯ ಹಿಟ್ಟಿನ ಹದದಲ್ಲಿ, ದೇವರ ಪೂಜೆಗೆ ಹತ್ತಿಸಿದ ಗಂಧದ ಕಡ್ಡಿಯ ಪರಿಮಳದಲ್ಲಿ, ಕೊನೆಗೆ ಉಪ್ಪು ಕಟ್ಟಿ ಸೋರುತ್ತಿದ್ದ ನಲ್ಲಿಯಲ್ಲೂ ಅಪ್ಪನ ನೆನಪು ಅಮ್ಮನಿಗೆ ಕಾಡುತ್ತಿತ್ತು. ಅಸಹನೆಯಿಂದ ಮಕ್ಕಳ ಎದುರಿಗೇ ಅಪ್ಪನನ್ನು ಗದರಿಸುತ್ತಿದ್ದ ಅಮ್ಮ ಎಲ್ಲಿ, ಈಗ ಕಾಣಲು ಎದುರಿಗಿಲ್ಲದ ಜೀವದ ಬಗ್ಗೆ ಹಳಹಳಿಸುವವಳೆಲ್ಲಿ? ಇದೆಂತಹ ವಿಚಿತ್ರ ಎನ್ನಿಸಿತು.
ಕೆಲವು ವರುಷಗಳ ಹಿಂದೆ ಅಮೆರಿಕೆಯ ಮನಶ್ಶಾಸ್ತ್ರಜ್ಞರೊಬ್ಬರು ಸುದೀರ್ಘ ದಾಂಪತ್ಯ ನಡೆಸಿದ (ಅಮೆರಿಕೆಯ ಮುಕ್ತ ಸಮಾಜದಲ್ಲಿ ಇದು ಬಲು ಅಪರೂಪದ ವಿಷಯವಷ್ಟೆ!) ದಂಪತಿಗಳನ್ನು ಅಧ್ಯಯನ ಮಾಡಿ, ಇಂತಹ ಗಂಡ-ಹೆಂಡತಿ ಇಬ್ಬರ ಮನೋಭಾವ ಹಾಗೂ ಮುಖಭಾವಗಳಲ್ಲಿ ಕಾಲ ಕಳೆದಂತೆಲ್ಲ ಸಾಮ್ಯ ತೋರಿಬರುತ್ತದೆ ಎಂದು ಗುರುತಿಸಿದ್ದರು. ಮನೋಭಾವದಲ್ಲಿ ಇರಬಹುದು. ಯಾರೊಬ್ಬರ ಜೊತೆಗಿನ ಹೊಂದಾಣಿಕೆಗಾಗಿ ತಮ್ಮ ಅನಿಸಿಕೆಗಳನ್ನು ಬದಲಿಸಿಕೊಂಡೋ, ಹತ್ತಿಕ್ಕಿಕೊಂಡೋ ನಡೆದಾಗ ಇಬ್ಬರ ಮನೋಭಾವವೂ ಒಂದೇ ಆದಂತೆ ಕಾಣಬಹುದು ಎಂದು ಸಮಾಧಾನ ಹೇಳಿಕೊಂಡಿದ್ದೆ. ಮುಖಭಾವ ಒಂದೇ ಆಗಿರುತ್ತದೆ ಎನ್ನುವುದು ತುಸು ಅತಿರೇಕದ ತೀರ್ಮಾನ ಎನ್ನಿಸಿತ್ತು. ನಮ್ಮ ಜೋಡಿಯನ್ನೇ ನೋಡಿದವರು ನನ್ನ ತೀರ್ಮಾನವನ್ನು ಖಂಡಿತ ಒಪ್ಪುತ್ತಾರೆ! ನನ್ನವಳು ಇಪ್ಪತ್ತು ವರುಷಗಳ ಹಿಂದೆ ಹೇಗಿದ್ದಳೋ ಹಾಗೆಯೇ ಕಾಣಿಸುತ್ತಾಳೆ. ಆದರೆ ಕನ್ನಡಿ ನನ್ನ ನರೆತ ಕೂದಲನ್ನು ಬಿಚ್ಚುಮನಸ್ಸಿನಿಂದ ಪ್ರತಿಬಿಂಬಿಸುತ್ತದೆ.
ಮೊನ್ನೆ ಮಡದಿ ಊರಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಬಂದೆರಗಿದ ಮೈಗ್ರೇನ್ ಇಷ್ಟೆಲ್ಲ ಆಲೋಚನೆಗೆ ಕಾರಣ. ಅವಳಿದ್ದಿದ್ದರೆ, ನನ್ನ ಮೌನವನ್ನು ಅಥವಾ ನಾನು ಕುಳಿತ ಭಂಗಿಯನ್ನು ಗಮನಿಸಿಯೇ ತಲೆನೋವೇ ಎಂದು ಕೇಳಿಬಿಡುತ್ತಿದ್ದಳು. ಕೆಲವೊಮ್ಮೆ ಹೀಗಾಗಿ ಇಲ್ಲ ಎಂದು ಮರೆಮಾಚುತ್ತಿದ್ದೆ. ಆದರೂ ನಾನು ಹೇಳುವುದು ಸುಳ್ಳು ಎನ್ನುತ್ತಿದ್ದಳು. ನನ್ನ ತಲನೋವು ಅವಳಿಗೆ ಹೇಗೆ ತಟ್ಟುತ್ತದೆಯೋ ತಿಳಿಯುವುದಿಲ್ಲ! ಹೀಗೇ ಏನಾದರೂ ಬರೆಯುವಾಗ 'ಅಯ್ಯೋ, ಒಂದು ಗುಟುಕು ಚಹಾ ಇದ್ದಿದ್ದರೆ,' ಎನಿಸುವಷ್ಟರಲ್ಲಿ ಚಹಾ ಟೇಬಲಿಗೆ ಬರುತ್ತಿತ್ತು. ನನಗೆ ಚಹಾ ಬೇಕೆನಿಸುವ ಸಮಯದಲ್ಲಿಯೇ ಅದು ದೊರೆಯುತ್ತಿತ್ತು. ರಜೆಯಲ್ಲಿ ಊರಿಗೆ ಹೋದಾಗ, ಇದ್ದಕ್ಕಿದ್ದ ಹಾಗೆ 'ಚಹಾ ಬೇಕೆ?' ಎನ್ನುವ ಪ್ರಶ್ನೆ ಬರುತ್ತಿತ್ತು. ಹಾಗೆ ಬೇಕೆನ್ನಿಸಿದ ಸಮಯದಲ್ಲಿಯೇ ಈ ಪ್ರಶ್ನೆ ಬರುತ್ತಿದ್ದದ್ದು ಸಖತ್ ಅಚ್ಚರಿಯ ವಿಷಯ. ಹೇಗೆ ತಿಳಿಯಿತು ಎಂದರೆ ಒಂದು ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು.
ಆದರೆ ಈ ಬಗೆಯ ಚಿಂತೆಗಳು ನನಗೇಕೆ ಬರುವುದಿಲ್ಲವೋ, ಗೊತ್ತಿಲ್ಲ. ಜವಳಿ ಅಂಗಡಿಯ ಮುಂದೆ ಹೋದಾಗಲೂ ಸೀರೆ ಬೇಕೆ ಎಂದು ಕೇಳುವುದಿಲ್ಲ. ಅಕ್ಷಯ ತ್ರಿತೀಯದಂದು ಊರಿಗೆ ಊರೇ ಚಿನಿವಾರರ ಅಂಗಡಿಗೆ ದಾಳಿ ಹಾಕಿದ್ದರೂ ಮಡದಿಯನ್ನು ಕರೆದೊಯ್ಯಬೇಕೆನ್ನಿಸಿರಲಿಲ್ಲ! ಹಾಗಿದ್ದರೂ, "ಐ ಮಿಸ್ ಯು" ಎಂದಳಲ್ಲ! ಏನು ಉತ್ತರ ಕೊಡಲಿ?
(ಇದನ್ನು ಬರೆದ ಮೇಲೆ, ನನ್ನ ಮೆಚ್ಚಿನ ಬ್ಲಾಗ್ (ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರೊಫೆಸರ್ ಆಗಿರುವ ಡಾ. ಅಭಿರಾಮನ್‌ರವರ ಬ್ಲಾಗ್) ನಾನೊಪಾಲಿಟನ್ ನಲ್ಲಿ ಈ ಒಂದು ಸಂವಾದವನ್ನು ಕಂಡೆ: ನ್ಯೂ ಯಾರ್ಕ್ ಟೈಂಸ್‌ನ ಸಾರಾ ಡೇವಿಡ್‌ಸನ್ ಅಮೆರಿಕೆಯ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಏಜಿಂಗ್‌ನ ಪ್ರೊಫೆಸರ್ ರಾಬರ್ಟ್ ಬಟ್ಲರ್‌ರವರ ಜೊತೆ ನಡೆಸಿದ ಸಂವಾದ ಇದು.
ಸಾರಾ: What about the institution of marriage? If you’re going to live to 100 and get married at 22 or 25. ... (ಮದುವೆಯ ಬಗ್ಗೆ ಏನು ಹೇಳುವಿರಿ? ನೀವು ನೂರು ವರುಷ ಬದುಕುವವರಾಗಿದ್ದು, ೨೨-೨೫ ವಯಸ್ಸಿನಲ್ಲಿ ಮದುವೆಯಾದರೆ...)
ಬಟ್ಲರ್: BUTLER: Oh, you are evil. (ಓಹ್.. ನೀನು ಬಲು ಕಿಲಾಡಿ..)
ಸಾರಾ: Are you still going to vow “till death do us part”? (ಆಗಲೂ ಸಾಯುವವರೆವಿಗೂ ಜೊತೆಗಿರೋಣ ಎಂದು ಶಪಥ ಮಾಡುವಿರಾ?)
ಬಟ್ಲರ್ BUTLER: There’s a demographer, Peter Uhlenberg, who said that divorce is a substitute for death, because in the old days there was enough death, unfortunately, particularly of women in childbirth, that the men would remarry. Someone even calculated that marriage now lasts about as long as it did then, it was ended by death rather than by divorce. (ಪೀಟರ್ ಉಲೆನ್‌ಬರ್ಗ್ ಎನ್ನುವ ಸಮುದಾಯ ವಿಜ್ಞಾನಿ ವಿಚ್ಛೇದನ ಸಾವಿಗೆ ಪರ್ಯಾಯ ಎಂದು ಹೇಳಿದ್ದಾನೆ. ಏಕೆಂದರೆ ಹಿಂದೆ ಸಾವು ಸಾಕಷ್ಟು ಇರುತ್ತಿತ್ತು. ದುರದೃಷ್ಟವಶಾತ್, ಮಗುವಿನ ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಸಾವಿಗೀಡಾಗಿ,ಗಂಡಂದಿರು ಮರುಮದುವೆಯಾಗಬಹುದಿತ್ತು. ಈಗಲೂ ಮದುವೆಯ ಬಂಧ ಅಂದಿನಷ್ಟೇ ದೀರ್ಘವಾಗಿದೆ ಎಂದು ಯಾರೋ ಲೆಕ್ಕ ಹಾಕಿದ್ದಾರೆ. ಆಗ ಅದು ವಿಚ್ಛೇದನದ ಬದಲಿಗೆ ಸಾವಿನಿಂದ ಕೊನೆಗೊಳ್ಳುತ್ತಿತ್ತು.)
ಈ ಲೆಕ್ಕಾಚಾರದಲ್ಲಿ ನಮ್ಮಲ್ಲಿ ಈಗ ವಿವಾಹ ಎಂಬ ವ್ಯವಸ್ಥೆ ಇನ್ನಷ್ಟು ದೀರ್ಘವಾಗಿದೆ ಎನ್ನೋಣವೇ?

Friday, April 6, 2007
ತೇಜಸ್ವಿಯವರಿಗೆ ನಮನಗಳು
ಪೂರ್ಣಚಂದ್ರ ಅಸ್ತಂಗತ. ಇದು ಟೀವಿ ಚಾನಲ್ ಒಂದರಲ್ಲಿ ಪೂಚಂತೇರವರ ನಿಧನದ ಬಗ್ಗೆ ಬಂದ ತಲೆಬರೆಹ. ಇದಕ್ಕಿಂತಲೂ ಉತ್ತಮ ತಲೆಬರೆಹ ಬೇಕಿಲ್ಲ. ಮೈಸೂರಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಮಾತನಾಡಿದ ಹಿರಿಯ ಅಂಕಣಕಾರ ಹೆಚ್‌ಎಸ್‌ಕೆ ಹೇಳಿದ್ದು, ಪೂಚಂತೇ "ಕುವೆಂಪು ರವರ ಮಗನಾಗಿ ಗುರುತಿಸಲ್ಷಡುವುದಕ್ಕಿಂತಲೂ, ಕುವೆಂಪು ರವರು ತೇಜಸ್ವಿಯವರ ತಂದೆ ಎಂದು ಗುರುತಿಸಲ್ಪಟ್ಟಿರುವುದೇ ಹೆಚ್ಚು," ಎಂದು ನುಡಿದದ್ದು ಅಪ್ಪಟ ಸತ್ಯ. ಹೀಗೆ ಸುಪ್ರಸಿದ್ಧ ತಂದೆಯ ನೆರಳಿನಲ್ಲಿ ಬೆಳೆದೂ, ಹಲವು ಹೊಸ ಪ್ರತಿಭೆಗಳಿಗೆ ಆಸರೆಯಾಗುವ ದೊಡ್ಡ ಆಲದ ಮರವಾಗಿ ತೇಜಸ್ವಿ ಬೆಳೆದರು.
ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಇಷ್ಟು ಮಾತ್ರ ಸತ್ಯ. ಅವರ ಸಾಹಿತ್ಯ ಕೇವಲ ಬುದ್ಧಿಜೀವಿಗಳಿಗಾಗಿಯಷ್ಟೆ ಇರಲಿಲ್ಲ. ಎಲ್ಲರಿಗೂ ದಕ್ಕುವಂತಹ ಅಪ್ಪಟ ಕನ್ನಡ ಜಾಯಮಾನದ ಸಾಹಿತ್ಯ ಎನ್ನಬಹುದು. ಬೇಂದ್ರೆ, ದೇವನೂರು, ತರಾಸುರವರಂತೆ ತೇಜಸ್ವಿಯವರ ಸಾಹಿತ್ಯವನ್ನು ಇಂಗ್ಲೀಶಿಗೆ ಅನುವಾದಿಸುವುದು ಬಹಳ ಕಷ್ಟಕರವಾದ ಕೆಲಸ. ಕನ್ನಡದ ಹಿರಿಯರೆನ್ನಿಸಿಕೊಂಡ ಇನ್ನೂ ಎಷ್ಟೋ ಕವಿ, ಲೇಖಕರ ಸಾಹಿತ್ಯವನ್ನು ಸುಲಭವಾಗಿ ಇಂಗ್ಲೀಶಿಗೆ ಅನುವಾದಿಸಬಹುದು. ಏಕೆಂದರೆ ಇವುಗಳಲ್ಲಿನ ಚಿಂತನೆಗಳಲ್ಲಿ ಇಂಗ್ಲೀಶಿನ ಜಾಯಮಾನ ಎದ್ದು ತೋರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದಲ್ಲಿ ತಾಯ್ನೆಲದ, ತಾಯ್ನುಡಿಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ ಅದರಲ್ಲಿನ ಪದ, ಪದಗಳ ಹಿಂದಿನ ಭಾವಾರ್ಥಗಳಿಗೆ ಸರಿಸಮನಾದ ಇಂಗ್ಲೀಶಿನ ಪದಗಳನ್ನು ಹುಡುಕುವುದು ಬಹಳ ಕಷ್ಟವೆನ್ನಿಸುತ್ತಿತ್ತು.
ಬರವಣಿಗೆಯಲ್ಲಿ ಹೊಸ ಸ್ಫೂರ್ತಿ ನೀಡಿದ ಆ ಚೇತನಕ್ಕೆ ನನ್ನ ನಮನ.
ತೇಜಸ್ವಿಯವರ ಕಾದಂಬರಿಗಳಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಚಿದಂಬರ ರಹಸ್ಯ. ಪ್ರತಿಯೊಂದು ಅಧ್ಯಾಯವೂ ಪ್ರತ್ಯೇಕ ಕಥೆಯಾಗಿ ನಿಲ್ಲುವಂತೆ ವಿಶಿಷ್ಟ ತಂತ್ರವನ್ನು ಬಳಸಿದ ಕಾದಂಬರಿ ಇದು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರ್ಥ ಇತ್ತಾದರೂ, ಉಳಿದ ಪಾತ್ರಗಳ ಪ್ರಭಾವದಿಂದಾಚೆಗೆ ಯಾವ ಪಾತ್ರವೂ ನಡೆದುಕೊಳ್ಳಲಾಗಲಿಲ್ಲ. ನಮಗೆ ಸಂಬಂಧವೇ ಇಲ್ಲದ ದೂರದ ಘಟನೆಯೊಂದು ನಮ್ಮ ಬದುಕನ್ನು ಎಲ್ಲೋ ಆಳವಾಗಿ ತಾಕುತ್ತದೆ. ಕೇವೋಸ್ ಸಿದ್ಧಾಂತದಂತೆ, ಯಾವುದೋ ನಿಕೃಷ್ಟ ಘಟನೆ ಬೃಹತ್ತಾಗಿ ಬೆಳೆದು ತೀವ್ರ ಪರಿಣಾಮ ಬೀರಬಹುದು. ಇಂತಹ ಘಟನೆಗಳಿಗೆ ಯಾವ ನಿಯಮ, ನೀತಿಗಳು ಲಗಾಮು ಹಾಕಲಾಗದು. ಚಿದಂಬರ ರಹಸ್ಯದ ಪ್ರತಿಯೊಂದು ಘಟನೆಗಳೂ ಹೀಗೆಯೇ ಅಲ್ಪ ಘಟನೆಗಳು. ಆದರೆ ಅವುಗಳ ಪರಿಣಾಮ ಮಾತ್ರ ತೀವ್ರ.
ಇಂದಿಗೂ ರಸ್ತೆಯಲ್ಲಿ ಎಲ್ಲಿಯಾದರೂ ಟಾರು ಬಳೆಯುವ ಯಂತ್ರ ಕಾಣಿಸಿದರೆ, ಚಿದಂಬರ ರಹಸ್ಯ ನೆನಪಾಗುತ್ತದೆ. ಹಾಗೆಯೇ, ಪೂಚಂತೇಯವರ ಹೆಸರು ಕೇಳಿದಾಗಲೆಲ್ಲ, ಕರ್ವಾಲೊ ರ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಪೂಚಂತೇಯವರ ಚಿತ್ರವನ್ನು ನೋಡಿದಾಗಲೂ ಅದು ಅವರು ಅನ್ನಿಸುವುದಿಲ್ಲ. ಕರ್ವಾಲೋರವರ ಚಿತ್ರವಷ್ಟೆ ಸತ್ಯ ಎನ್ನಿಸುತ್ತದೆ.

Wednesday, April 4, 2007
Witness Box 3 ಸಾಕ್ಷಿಕಟ್ಟೆ ೩
"ಈವತ್ತಿಗೆ ನಿಮಗೆ ಮುಕ್ತಿ ಸಾರ್," ಎಂದರು ಪಟ್ಟಾಭಿರಾಮನ್. ಈತ ಮೈಸೂರಿನ ಒಂದು ಪೋಲೀಸ್ ಠಾಣೆಯ ಪೀಸಿ. ಕೋರ್ಟು ವ್ಯವಹಾರಗಳ ನಿರ್ವಹಣೆ ಇವರ ಕರ್ತವ್ಯ. ಪ್ರತಿ ಬಾರಿ ಕೋರ್ಟಿಗೆ ಹೋದಾಗಲೂ ಈತನಿಗೆ ಹಾಜರಿ ಒಪ್ಪಿಸಬೇಕಿತ್ತು. ಹಾಜರಿ ಒಪ್ಪಿಸಿದಾಗಲೆಲ್ಲ, ಅಳುಕಿನಿಂದಲೇ ದಯವಿಟ್ಟು ಒಳಗೆ ಕುಳಿತುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದ. ಪೋಲೀಸರಿಗೂ ಅಳುಕು ಎನ್ನುವುದು ಇರುತ್ತದೆ ಎನ್ನುವುದು ಪಟ್ಟಾಭಿರಾಮನ್‌ರನ್ನು ನೋಡಿ ತಿಳಿಯಿತು.
ಮುಕ್ತಿ ಸಿಕ್ಕಿದ್ದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವುದರಿಂದ ಎಂದು ಹೇಳಬೇಕಿಲ್ಲ, ಅಲ್ಲವೇ? ಎಂಟು ಬಾರಿ, ಎರಡೂವರೆ ವರುಷಗಳವರೆಗೆ ನ್ಯಾಯಾಲಯಕ್ಕೆ ತಿರುಗಿದ ಅನಂತರ ನನ್ನ ಸಾಕ್ಷಿ ಎನ್ನುವುದು ಮುಗಿಯಿತು. ಆ ಖಟ್ಲೆಯಲ್ಲಿ ಇದುವರೆವಿಗೂ ಮುಗಿದಿರುವುದು ಎರಡೇ ಸಾಕ್ಷಿಯ ವಿಚಾರಣೆ. ಇನ್ನೂ ಹತ್ತಾರು ಸಾಕ್ಷಿಗಳಿದ್ದಾರೆ. ಇವರೆಲ್ಲರ ಸಾಕ್ಷಿಯೂ ಮುಗಿದು, ಅಪಘಾತ ನಡೆಸಿದ ಚಾಲಕನಿಗೆ ದಂಡ ಸಿಗುವಷ್ಟರಲ್ಲಿ, ಆ ಚಾಲಕನಿಗೆ ಶಿಕ್ಷೆ ದೊರೆತೇ ಹೋಗಿರುತ್ತದೆ.
ನಾಗರೀಕ ಕರ್ತವ್ಯ ಎನ್ನುವ ಮನೋಭಾವದಿಂದ ಈ ರೀತಿಯಲ್ಲಿ ಸಾಕ್ಷಿ ಹೇಳುವವರಿಂದಾಗಿ ಪ್ರತಿದಿನವೂ ಎಷ್ಟು ಸಮಯ ಹಾಳಾಗುತ್ತಿರಬಹುದು ಎನ್ನುವುದಕ್ಕೆ ಒಂದು ಪುಟ್ಟ ಲೆಕ್ಕ ಹಾಕಿದೆ. ಹೇಗೂ, ನ್ಯಾಯಾಲಯದಲ್ಲಿ ನನ್ನನ್ನು ಸಾಕ್ಷಿ ಕಟ್ಟೆಗೆ ಕರೆಯುವವರೆವಿಗೂ ಅಲ್ಲಿನ ಬೆಂಚಿನ ಬಿಸಿ ಏರಿಸಬೇಕಿತ್ತಲ್ಲ! ಸಮಯ ಕಳೆಯಲು ಓ. ಹೆನ್ರಿಯ ಒಂದು ಪುಸ್ತಕವನ್ನು ಕೊಂಡೊಯ್ದಿದ್ದೆನಾದರೂ, ನ್ಯಾಯಾಲಯದೊಳಗೆ ಸಾಹಿತ್ಯ ಓದುವುದು ಅಪರಾಧವಿರಬಹುದೇ ಎನ್ನುವ ಆತಂಕ ಕಾಡಿ ಪುಸ್ತಕವನ್ನು ತೆರೆಯಲೇ ಇಲ್ಲ! ಬೆಳಗ್ಗೆ ಹತ್ತು ಗಂಟೆಗೆ ನ್ಯಾಯಾಲಯದೊಳ ಹೊಕ್ಕವನಿಗೆ ಮುಕ್ತಿ ಸಿಕ್ಕಾಗ ಸಂಜೆ ನಾಲ್ಕು ಗಂಟೆ. ನನ್ನ ಪಾಟೀಸವಾಲಿಗೆ ಸಂದ ಸಮಯ ಹತ್ತು ನಿಮಿಷಗಳು. ೩೬೦ ನಿಮಿಷಗಳಲ್ಲಿ ಪಾಟೀಸವಾಲಿನ ೧೦ ನಿಮಿಷ ಕಳೆದರೆ ಉಳಿದ ೩೫೦ ನಿಮಿಷಗಳು ನಾನು, ಅಪರಾಧಿ, ಹಾಗು ಅಪರಾಧಿಯ ವಕೀಲರಿಗೆ ಮಾಡುವುದು ಏನೂ ಇರಲಿಲ್ಲ.
ಹೀಗಾಗಿ ಒಂದು ಲೆಕ್ಕಾಚಾರ ಮಾಡಿದೆ. ಒಂದು ಅಂದಾಜಿನ ಪ್ರಕಾರ ಇಂದು ದೇಶಾದ್ಯಂತ ೧ ಕೋಟಿಗೂ ಹೆಚ್ಚು ಖಟ್ಲೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇವು ಪ್ರತಿಯೊಂದರಲ್ಲೂ ಒಬ್ಬ ಅಪರಾಧಿ, ಒಬ್ಬ ವಕೀಲ, ಒಬ್ಬ ಸಾಕ್ಷಿ ಇದ್ದಾರೆ ಎಂದಿಟ್ಟುಕೊಳ್ಳೋಣ. ದಿನವೊಂದಕ್ಕೆ ಒಂದೇ ಖಟ್ಲೆಯಲ್ಲಿ ಸಾಕ್ಷಿ ಮತ್ತು ಅಪರಾಧಿ ಹಾಜರಾಗುವುದರಿಂದ ಇವರಿಬ್ಬರ ದಿನವೂ ವ್ಯಯವಾಯಿತು. ಈ ಒಂದುಕೋಟಿ ಕೇಸುಗಳು ತಿಂಗಳಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಬರುತ್ತವೆ ಎನ್ನೋಣ. ಹಾಗಿದ್ದರೆ ಪ್ರತಿ ತಿಂಗಳೂ ಎರಡು ಕೋಟಿ ಜನರು ತಮ್ಮ ಒಂದು ದಿನವನ್ನು ನ್ಯಾಯಾಲಯದಲ್ಲಿಯೇ ಕಳೆಯುತ್ತಾರೆ ಎಂದಾಯಿತು. ಕೆಲವು ಖಟ್ಲೆಗಳಲ್ಲಿ ಹತ್ತಾರು ಸಾಕ್ಷಿಗಳಿರುತ್ತಾರೆ. ಎಲ್ಲರ ವಿಚಾರಣೆಯೂ ಒಂದೇ ದಿನ ಆಗದಿದ್ದರೂ, ಎಲ್ಲರೂ ನ್ಯಾಯಾಲಯಕ್ಕೆ ಹಾಜರಿರಲೇ ಬೇಕು. ಹಾಗಿದ್ದರೆ ಎಷ್ಟು ಕಾಲ ವ್ಯಯವಾಗುತ್ತಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಪರಿಹಾರ ಇಲ್ಲವೇ?
ಇಂದಿನ ಐಟಿ ಯುಗದಲ್ಲಿಯೂ ಮೊದಲು ಹಾಜರಿ ಕರೆದು ಅನಂತರ ವಿಚಾರಣೆಗೆ ತೊಡಗುವುದು ಅವಶ್ಯವೇ? ಹಾಜರಿಯನ್ನು ಮೊದಲೇ ಖಾತರಿ ಪಡಿಸಿಕೊಳ್ಳಲು ಆಗುವುದಿಲ್ಲವೇ? ಇವೆಲ್ಲ ಪ್ರಶ್ನೆಗಳು ಕಾಡಿತು.
ಈ ಲೆಕ್ಕಾಚಾರಗಳ ನಡುವೆ ನ್ಯಾಯಾಲಯದಲ್ಲಿ ನಡೆದ ಸ್ವಾರಸ್ಯಕರವಾದ ಘಟನೆಯೊಂದಕ್ಕೂ ನಾನು ಸಾಕ್ಷಿ ಆದೆ. ಒಂದು ಕಳ್ಳತನದ ಖಟ್ಲೆ. ಫಿರ್ಯಾದುದಾರರು ೭೦ ವರುಷದ ಮುದುಕ. ನಿವೃತ್ತ ಮೇಷ್ಟರು. ಮನೆಯಲ್ಲಿದ್ದ ೪೦ ಗ್ರಾಂ ಆಭರಣವನ್ನು ತಮ್ಮ ಪರಿಚಿತನಾದ ಆಟೋ ಚಾಲಕನೊಬ್ಬ ಸಮಯ ಸಾಧಿಸಿ ಕದ್ದಿದ್ದ ಎಂದು ದೂರು ನೀಡಿದ್ದರು. ಅಪರಾಧಿಯೂ ಅಲ್ಲಿದ್ದ. ಆತ ಅಡವಿಟ್ಟಿದ್ದ ಒಡವೆಗಳೂ ಸಿಕ್ಕಿದ್ದುವು. ಈಗ ನಡೆದಿದ್ದುದು ವಿಚಾರಣೆ. ಮೇಷ್ಟರನ್ನು ವಿಚಾರಣೆಗೆ ಕರೆಸಿ ವಿವರಗಳನ್ನು ಸರಕಾರಿ ಲಾಯರು ಕೇಳಿದರು. ಅನಂತರ ಪಾಟೀ ಸವಾಲು. ಆ ದಿನ ನಡೆದ ಎಲ್ಲ ಪಾಟೀ ಸವಾಲುಗಳಲ್ಲಿಯೂ ಒಂದೆರಡು ಪ್ರಶ್ನೆಗಳು ಸಾಮಾನ್ಯವಾಗಿರುತ್ತಿದ್ದುವು. "ನೀವು ಅಪರಾಧಿಯ ಮೇಲೆ ಯಾವುದೋ ವೈಷಮ್ಯದಿಂದ ದೂರು ನೀಡಿದ್ದೀರಿ." "ಪೋಲೀಸರು ನಿಮಗೆ ಪರಿಚಯ. ಅದರಿಂದಾಗಿ ಅವರೇ ಹೇಳಿ ಈ ಖಟ್ಲೆ ಹೂಡಿದ್ದಾರೆ." "ದೂರು ನೀವು ಕೊಟ್ಟಿಲ್ಲ. ಪೋಲೀಸರೇ ಬರೆದು ನಿಮ್ಮಿಂದ ಸಹಿ ಮಾತ್ರ ಪಡೆದುಕೊಂಡಿದ್ದಾರೆ." "ಪೋಲೀಸರು ಪತ್ತೆ ಮಾಡಿದ ಕೇಸುಗಳ ಸಂಖ್ಯೆ ಹೆಚ್ಚಾಗಲಿ ಎಂದು ಯಾರನ್ನೋ ಹಿಡಿದು ದೂರು ಕೊಟ್ಟಿದ್ದಾರೆ." ಹೀಗೆ.
ಮೇಷ್ಟರಿಗೂ ಇಂತಹುದೇ ಪಾಟೀಸವಾಲು ಎದುರಾಯಿತು. ಪಾಟೀ ಸವಾಲು ನಡೆಸಿದ ಎದುರು ಪಕ್ಷದ ವಕೀಲರು, ಮೇಷ್ಟರನ್ನು "ನೀವು ಹಿಂದಿನ ದಿನ ರಾತ್ರಿ ಆಟೋ ಚಾಲಕ ವಾಡಿಕೆಗಿಂತಲೂ ಹೆಚ್ಚು ಹಣ ಕೇಳಿದ್ದಕ್ಕೆ, ಜಗಳವಾಡಿ ಆ ಸಿಟ್ಟಿನಿಂದ ಸುಳ್ಳು ಕೇಸು ಹಾಕಿದ್ದೀರಾ?" ಎಂದು ಆರೋಪಿಸಿದ. ಮೇಷ್ಟರು ಸಿಟ್ಟಿನಿಂದ ನಾನು ಆಟೋ ಹತ್ತಲೇ ಇಲ್ಲ ಆ ದಿನ ಅಂತ ಹೇಳಿದ ಮೇಲೂ ಈ ಪ್ರಶ್ನೆ ಕೇಳುತ್ತಿದ್ದೀರಲ್ಲ? ಇದೇನು ಸರಿಯಾ?" ಎಂದು ದಬಾಯಿಸಿದಾಗ, ನ್ಯಾಯಾಧೀಶರು ಸಾಕ್ಷಿ ಕೇವಲ ಇಲ್ಲ, ಹೌದು ಎನ್ನುವ ಉತ್ತರವನ್ನಷ್ಟೆ ಹೇಳಬೇಕು ಎಂದರು.
ಇದಾದಮೇಲೆ ಮೇಷ್ಟರ ಅಮ್ಮ (೮೭ ವರುಷದ ಮುದುಕಿ)ನ ಪಾಟೀಸವಾಲು. "ಆರೋಪಿ ಅಲಮಾರಿ ತೆಗೆದಾಗ ನಿಮಗೆ ಸದ್ದು ಕೇಳಿಸಲಿಲ್ಲವೇ?" "ಇಲ್ಲ." "ನಿಮಗೆ ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?" "ಏನಪ್ಪ ಕೇಳಿದೆ?" ಒಟ್ಟಿನಲ್ಲಿ ಆಕೆಯ ಕಿವಿ ಮಂದ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೂ, ಎದುರು ಪಕ್ಷದ ವಕೀಲರು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಆಕೆ ಹೌದು ಎನ್ನುವಂತೆ ತಲೆಯಾಡಿಸುತ್ತಿದ್ದರು. ಇದು ತಮ್ಮ ಸಾಕ್ಷಿಗೆ ವಿರುದ್ಧವಾಗಿದೆ ಎಂದು ತಿಳಿದಾಗ ಮೇಷ್ಟರು ಎದ್ದು ನ್ಯಾಯಾಧೀಶರನ್ನು ಉದ್ದೇಶಿಸಿ ಆಕೆಗೆ ಪ್ರಶ್ನೆ ಸರಿಯಾಗಿ ತಿಳಿಯಲಿಲ್ಲ ಎನ್ನಿಸುತ್ತದೆ ಎಂದಾಗ ಆತನನ್ನು ಹಾಗೆ ಮಧ್ಯೆ ಪ್ರವೇಶಿಸಿ ಮಾತನಾಡುವುದು ಅವಮರ್ಯಾದೆ ಮಾಡಿದಂತೆ ಎಂದು ಕುಳ್ಳಿರಿಸಲಾಯಿತು. ಅಜ್ಜಿಗೆ ಕಿವಿ ಕೇಳುತ್ತಿಲ್ಲ ಎಂದು ತಿಳಿದರೂ, ಪಾಟೀ ಸವಾಲು ಮುಂದುವರೆದು, ಆಕೆ ಎಲ್ಲಕ್ಕೂ ತಲೆ ಆಡಿಸುವುದು ನಡೆಯಿತು. ಇಡೀ ನ್ಯಾಯಾಲಯದಲ್ಲಿ ಮುಸು, ಮುಸು ನಗೆ ಹಬ್ಬಿತ್ತು. ಆದರೆ ಯಾರೂ ಆಕೆಗೆ ಕೇಳುಸುವಂತೆ ಪ್ರಶ್ನೆ ಕೇಳಲಿ ಎಂದು ಹೇಳಲಿಲ್ಲ. ನ್ಯಾಯಾಧೀಶರೂ ಸಹ. ಸಾಕ್ಷಿಗೆ ನಡುವೆ ನ್ಯಾಯಾಧೀಶರು ಹಾಗೆ ಸಹಾಯ ಮಾಡುವುದು ಕಾನೂನಿಗೆ ವಿರುದ್ಧವೇನೋ? ಒಟ್ಟಾರೆ, ತಾನು ಏನು ಸಾಕ್ಷಿ ಹೇಳಿದೆ ಎನ್ನುವುದು ತಿಳಿಯದೆಯೇ ಆ ಅಜ್ಜಿ ಸಾಕ್ಷಿ ಹೇಳಿಯಾಗಿತ್ತು.

Friday, March 30, 2007
ಹತ್ತು ವಿಷಯಗಳು
ಮೊನ್ನೆ ಬ್ಲಾಗ್ ಪ್ರಪಂಚದಲ್ಲಿ ವಾಕಿಂಗ್ ಹೋಗಿದ್ದೆ. ಹೀಗೇ ವಿಜ್ಞಾನದ ಮೇಲೆ ಯಾವ ಯಾವ ಬ್ಲಾಗ್‌ಗಳು ಸಿಗಬಹುದು ಎಂದು ಹುಡುಕಾಟ ನಡೆದಿತ್ತು. ಆಗ ಕಣ್ಣಿಗೆ ಬಿತ್ತು ಒಂದು ಸ್ವಾರಸ್ಯಕರವಾದ ಬ್ಲಾಗ್. ಭೂಮಿ ಬಿಸಿಯೇರುವುದನ್ನು (Global Warming) ತಡೆಯಲು ನಾವು ಏನು ಮಾಡಬಹುದು ಎಂದು ಒಂದು ಲೇಖನ. ಈ ಬಗ್ಗೆ ವೈಯಕ್ತಿಕವಾಗಿ ನಾವು ಮಾಡಬಹುದಾದ ಐವತ್ತು ಸುಲಭ, ನಿತ್ಯಕರ್ಮಗಳನ್ನು ಅಲ್ಲಿ ಬರೆಯಲಾಗಿತ್ತು. ನಿಜ. ಅಲ್ಲಿರುವ ಎಲ್ಲ ಅಂಶಗಳೂ ಅಮೆರಿಕನ್ನರು ಪಾಲಿಸಬೇಕಾದ, ಪಾಲಿಸಬಹುದಾದ ವಿಷಯಗಳು. ಆದರೆ ನಾವೂ ನಮ್ಮ ನಿತ್ಯ ಜೀವನದಲ್ಲಿ ಇಂತಹ ಕೆಲವು ವಿಷಯಗಳನ್ನು ಸ್ವಯಂ ಶಿಸ್ತಿನಿಂದ ಅಳವಡಿಸಿಕೊಂಡರೆ ಸಾರ್ವಜನಿಕ ಬದುಕು ಹಸನಾಗಬಹುದಲ್ಲ ಎನ್ನಿಸಿತು. ಗ್ಲೋಬಲ್ ವಾರ್ಮಿಂಗ್‌ನ ಬಿಸಿ, ಸರಕಾರಕ್ಕೆ ತಾಕಿದಷ್ಟು ಜನಸಾಮಾನ್ಯರನ್ನು ತಾಕುತ್ತಿಲ್ಲ ಎನ್ನೋಣ. ಏಕೆಂದರೆ ಇದರ ಬಗ್ಗೆ ತಿಳುವಳಿಕೆ ಹಾಗೂ ಅದರ ನೇರ ಪರಿಣಾಮಗಳು ತಕ್ಷಣಕ್ಕೆ ಗೋಚರವಾಗುವಂತಹುದಲ್ಲ. ಆದರೆ ಬೆಳಗಿನ ಕಸ ಬಿಸಾಡುವ ಕರ್ಮದ ಬಗ್ಗೆ ಕೆಲವು ಶಿಸ್ತು ಬಳಸಬಹುದು ಎನ್ನಿಸುತ್ತದೆ. ಐವತ್ತು ವಿಷಯಗಳು ನನ್ನ ಮನಸ್ಸಿಗೆ ಬರುತ್ತಿಲ್ಲ. ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ. ನಿಮಗೂ ಏನಾದರೂ ಹೊಳೆದರೆ ಕಮೆಂಟ್ ತಿಳಿಸಿ. ಐವತ್ತೋ, ನೂರೋ, ತಡವಿಲ್ಲದೆ ಅಳವಡಿಸಿಕೊಳ್ಳಬಹುದಾದ ವಿಷಯಗಳನ್ನು ಪಟ್ಟಿ ಮಾಡಬಹುದು.
೧. ಅನ್ನ, ಮುಸುರೆ ಇತ್ಯಾದಿ ಕಸದ ಜೊತೆಗೆ ಪೇಪರು, ಪ್ಲಾಸ್ಟಿಕ್ ಬೆರೆಸುವುದಿಲ್ಲ.
೨. ಪ್ಲಾಸ್ಟಿಕ್ ವಸ್ತುಗಳನ್ನು ಬೇರೆಯೇ ಕಸದ ಬುಟ್ಟಿಯಲ್ಲಿ ಹಾಕುತ್ತೇನೆ.
೩. ಪೇಪರ್ ಕಸವನ್ನು ಪ್ರತ್ಯೇಕವಾಗಿಟ್ಟು, ಆಗಾಗ್ಗೆ ಸುಡುತ್ತೇನೆ.
೪. ದಿನಪತ್ರಿಕೆಗಳನ್ನು ರದ್ದಿಯವರಿಗೆ ನೀಡುವುದು.
೫. ಅಂಗಡಿಗೆ ಹೋಗುವ ಮುನ್ನ, ಒಂದು ಬಟ್ಟೆಯ ಚೀಲವನ್ನು ಕೊಂಡೊಯ್ಯುತ್ತೇನೆ.
೬. ಅಂಗಡಿಯವ ಪ್ಲಾಸ್ಟಿಕ್ ಚೀಲ ನೀಡಲು ಬಂದರೆ ನಿರಾಕರಿಸುತ್ತೇನೆ.
೭. ಮನೆಯಲ್ಲಿ ಗಿಡ ಬೆಳೆಸಿದ್ದರೆ, ಮುಸುರೆ, ತರಕಾರಿಯ ಸಿಪ್ಪೆ ಇತ್ಯಾದಿ ಜೈವಿಕ ಶಿಥಿಲೀಕರಣಗೊಳ್ಳಬಲ್ಲ ಕಸವನ್ನು ಗೊಬ್ಬರವನ್ನಾಗಿ ಬಳಸುತ್ತೇನೆ.
ಮೈಸೂರಿನ ಗೋಕುಲಂ ರಸ್ತೆಯಲ್ಲಿ ಶಿವ ಮೆಡಿಕಲ್ಸ್ ಎನ್ನುವ ಅಂಗಡಿಯಲ್ಲಿ ನಾನು ಓದಿದ ನೋಟೀಸು. "ಪ್ಲಾಸ್ಟಿಕ್ ಚೀಲ ಪರಿಸರಕ್ಕೆ ಹಾನಿಕರ. ದಯವಿಟ್ಟು ಪ್ಲಾಸ್ಟಿಕ್ ಚೀಲವನ್ನು ಕೇಳಬೇಡಿ." ಅಲ್ಲಿ ನೀವು ಔಷಧಿ ಕೊಂಡರೆ, ಪೇಪರ್ ಕವರಿನಲ್ಲಿ ಹಾಕಿ ಕೊಡುತ್ತಾರೆ.
ಇದೇ ಕಾಳಜಿ, ಶಿಸ್ತು ನಾವೆಲ್ಲರೂ ಅಳವಡಿಸಿಕೊಂಡರೆ, ಗಾಳಿ ಬಂದಾಗ ಬೀದಿ ಮೂಲೆಯ ಕಸದ ತೊಟ್ಟಿಯಿಂದ ಹಾರಿ ಬರುವ ಪ್ಲಾಸ್ಟಿಕ್ ಚೀಲ ವಸ್ತುಗಳು ಮನೆಯ ಮುಂದೆ ಚಿತ್ತಾರ ಬಿಡಿಸುವುದು ತಪ್ಪುತ್ತದೆ. ಅವನ್ನು ನುಂಗಿ ದನ, ಕರುಗಳ ಹೊಟ್ಟೆ ಬಿಗಿಯುವುದೂ ನಿಲ್ಲುತ್ತದೆ.
ಇದು ನನಗೆ ತಿಳಿದ ಪಟ್ಟಿ. ಇನ್ನೂ ಸೇರಿಸಬಹುದು. ವಿದ್ಯುತ್ ಉಳಿತಾಯ. ಹಣದ ಉಳಿತಾಯ. ಸಲಹೆಗಳಿಗೆ ಕೊರತೆ ಇರದು. ಆದರೆ ನಾವು ಅಳವಡಿಸಿಕೊಳ್ಳಬಹುದಾದ ಪ್ರಾಕ್ಟಿಕಲ್ ಉಪಾಯಗಳನ್ನು ದಯವಿಟ್ಟು ತಿಳಿಸಿ.

Tuesday, March 27, 2007
ಬ್ಲಾಗ್, ಬ್ಲಾಗ್, ಬ್ಲಾಗ್
ಅಂತೂ ಒಂದು ದಿನ ಈ ಪ್ರಶ್ನೆಯನ್ನು ಎದುರಿಸಲೇ ಬೇಕಿತ್ತು? ನಾನೇಕೆ ಬ್ಲಾಗಿಸುತ್ತಿದ್ದೇನೆ (ಬ್ಲಾಗಿಸುವುದು ಪದದ ಬಳಕೆಗಾಗಿ ಶ್ರೀ ಪವನಜರಿಗೆ ಕೃತಜ್ಞತೆಗಳು) ಎನ್ನುವ ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದಿದ್ದೆ. ಬ್ಲಾಗು ಆರಂಭಿಸಲು ಸ್ಫೂರ್ತಿ ಗೆಳೆಯ ಮಂಜುನಾಥ ರು ಆರಂಭಿಸಿದ ಬ್ಲಾಗ್ ಎಂದರೆ ತಪ್ಪೇನಲ್ಲ. ಆದರೆ ಅದಕ್ಕೂ ಮೊದಲು ಇದನ್ನು ಆರಂಭಿಸಬೇಕು, ವಿಕಿಪೀಡಿಯಾದಲ್ಲಿ ಬರೆಯಬೇಕೆಂಬ ಹಂಬಲವೂ ಇತ್ತು. ಸಮಸ್ಯೆ ಎಂದರೆ ಕನ್ನಡವನ್ನು ವೆಬ್ ಪುಟಗಳಲ್ಲಿ ಬಳಸುವ ತಾಂತ್ರಿಕ ಸಮಸ್ಯೆಗಳನ್ನು ಮೀರುವೆನೇ ಎನ್ನುವ ಆತಂಕದಿಂದ ಪ್ರಯತ್ನವನ್ನೇ ಮಾಡಿರಲಿಲ್ಲ. ಅಂದ ಹಾಗೇ, the fear of failure is the reason for many failures ಅಲ್ಲವೇ?
ಕೊನೆಗೂ, ಒಂದು ದಿನ ಆರಂಭ ಮಾಡಿಯೇ ಬಿಟ್ಟೆ. ಇದಕ್ಕೂ ಹಿಂದೆ ಡಾಟ್ ಕಾಮ್‌ಗಳ ಭರಾಟೆ ಹೆಚ್ಚಿದ್ದಾಗ ನಾನೂ ಒಂದು ಡಾಟ್ ಕಾಮ್ ಆರಂಭ ಮಾಡಬಾರದೇಕೆ ಎಂದು ಹಂಬಲಿಸಿದ್ದೆ. ದುರಾದೃಷ್ಟವಶಾತ್, (ಅಥವಾ ಕನ್ನಡಿಗರ ಅದೃಷ್ಟ) ನನ್ನ ಗಣಕಯಂತ್ರದ ಸಾಮರ್ಥ್ಯ ಅದಕ್ಕೆ ತಕ್ಕಂತಿರಲಿಲ್ಲ. ಜೊತೆಗೆ, ಬ್ರಾಡ್ ಬ್ಯಾಂಡ್ ಈಗ ನೀಡುವ ಸೌಕರ್ಯ ಆಗ ಇರಲೂ ಇಲ್ಲ. ಹೀಗಾಗಿ, ನಮ್ಮಕರ್ನಾಟಕ ಡಾಟ್ ಕಾಮ್ ನಂತಹ ಇತರೇ ವೆಬ್ ತಾಣಗಳ ಬೆನ್ನೇರಿ ಸವಾರಿ ಮಾಡಬೇಕಾಗಿತ್ತು.
ಕಾಲ ಬದಲಾಗಿದೆ. ವೆಬ್ ಆಧರಿತ ಸೇವೆಗಳು ಸಮೃದ್ಧಿಯಾಗಿವೆ. ಮೊದಲು, ಮೈಸೂರಿನಲ್ಲಿ ಒಂದು ಸೈಟು ಕೊಳ್ಳಲು ಖರ್ಚಾಗುತ್ತಿದ್ದಷ್ಟು ವೆಚ್ಚ ಒಂದು ವೆಬ್ ತಾಣ ಸೃಷ್ಟಿಸಲು ಆಗುತ್ತಿತ್ತು. ಈಗ ಗಣಕಯಂತ್ರಗಳ ನೆರವಿನಿಂದ ಬಂದ ಐಟಿ ಕ್ರಾಂತಿಯಿಂದಾಗಿ ಮೈಸೂರಿನಲ್ಲಿ ವೆಬ್ ತಾಣಗಳು ಕಾಸು ಖರ್ಚಿಲ್ಲದೆ ದೊರಕುತ್ತಿವೆ. ನೆಲದ ಬೆಲೆ ಮುಗಿಲಿಗೇರಿದೆ. ಹೀಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒಂದು ಸೈಟು ಕೊಡುವವರೆವಿಗೂ, ನನ್ನದೇ ಒಂದು ಸೈಟು ಇದೆ ಎನ್ನುವುದಕ್ಕಾದರೂ, ಬ್ಲಾಗ್ ಆರಂಭಿಸಬೇಕೆಂದು ತೀರ್ಮಾನಿಸಿದೆ.
ಹಂಬಲವೇನೋ ನಿಜವಾಗಿದೆ. ಮೊನ್ನೆ ಮಂಜುನಾಥರವರು ಇ-ಮೈಲಿನಲ್ಲಿ ಶರವೇಗದಲ್ಲಿ ಬ್ಲಾಗ್ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಪ್ರತಿಬಾರಿ ಬ್ಲಾಗ್ ರಚಿಸಿದಾಗಲೂ ಅವರಿಗೆ ಒಂದು ಇ-ಮೈಲ್ ಹೋಗುವುದರಿಂದ ಹೀಗೆ ದೂರಿರಬೇಕು ಎಂದು ಕೊಂಡಿದ್ದೀನಿ. ಬ್ಲಾಗ್ ಆರಂಭಿಸಿದಾಗ ಈ ಪ್ರಪಂಚದಲ್ಲಿ ಒಂದು ಸುತ್ತು ಹೋಗಿ ಬಂದೆ. (ಎಷ್ಟೆಂದರೂ ಅಲೆಮಾರಿಯಲ್ಲವೆ?) ಎಷ್ಟು ವೈವಿಧ್ಯಮಯ ಪ್ರಪಂಚ ಎನ್ನಿಸಿತು. ನಾನು ಇದುವರೆವಿಗೂ ಕೈ ಹಚ್ಚದ ಒಂದು ಪ್ರಯತ್ನ ಮಾಡಲು ಇದು ಒಳ್ಳೆಯ ಅವಕಾಶ ಎಂದೂ ಅನಿಸಿತು. ಹತ್ತಿಪ್ಪತ್ತು ವರುಷಗಳಿಂದ ಕೇವಲ ವಿಜ್ಞಾನದ ಬೆಳವಣಿಗೆಗಳ ಬಗ್ಗೆಯಷ್ಟೆ ಬರೆಯುತ್ತಿರುವುದರಿಂದ ನಾನು ಅತ್ತ ಬರೆಹಗಾರನೂ ಅಲ್ಲ, ಇತ್ತ ವಿಜ್ಞಾನಿಯೂ ಅಲ್ಲದ ತ್ರಿಶಂಕುವಾಗಿದ್ದೇನೆ. ನನ್ನ ಕನ್ನಡದಲ್ಲಿ ಇಂಗ್ಲೀಷಿನ ಪ್ರಭಾವ ಅಚ್ಚೊತ್ತಿದೆ ಎಂದು ಗೆಳೆಯ ಸೋಮಿ (ಬಿ. ಎಸ್. ಸೋಮಶೇಖರ್) ಹೇಳುತ್ತಿದ್ದುದೂ ಉಂಟು. ಜೊತೆಗೆ, ಕನ್ನಡದ ಕೆಲವು ಸೂಕ್ಷ್ಮ ವ್ಯಾಕರಣಗಳನ್ನು ನಾನು ನಿರ್ಲಕ್ಷಿಸುತ್ತಿದ್ದೇನೆ ಎಂದೂ ಸೋಮಿ ದೂರಿದ್ದರು. ವಾಸ್ತವವೇ, ವಿಜ್ಞಾನವನ್ನು ಸರಳ ಭಾಷೆಯಲ್ಲಿ ಹೇಳುವಾಗ ಅದು ಆಡು ಭಾಷೆಯಾಗಿದ್ದೂ ಉಂಟು. ಈ ಲೇಖನದಲ್ಲಿಯೂ ವ್ಯಾಕರಣ ದೋಷಗಳಿರಬಹುದು. ಓದುಗರು ತಾಳಿಕೊಂಡು, ತಿಳಿಸಿದರೆ ತಿದ್ದಿಕೊಳ್ಳಲು ಅನುಕೂಲ.
ವಿಜ್ಞಾನವನ್ನು ಮರೆತು ಬೇರೇನು ಬರೆಯಬಹುದು? ಸಾಹಿತ್ಯ ಬರೆಯೋಣವೆಂದರೆ ಭಾಷೆಯ ಲಾಲಿತ್ಯವನ್ನು ಸರಿಯಾಗಿ ತಿಳಿದವನಲ್ಲ. ಜೊತೆಗೆ, ಕವಿಯಾಗಲು ಬಲು ಸಂವೇದನಶೀಲ ಮನಸ್ಸು ಬೇಕು ಎನ್ನುವುದು ನನ್ನ ನಂಬಿಕೆ. ನನ್ನದು ಹೇಳಿಕೇಳಿ,ಯಾವ ವಸ್ತು, ವಿಷಯ ದೊರೆತರೂ ಅದನ್ನು ಕತ್ತರಿಸಿ ಒಳ ರಚನೆ ನೋಡುವ ವೈಜ್ಞಾನಿಕ ಬುದ್ಧಿ. ಇನ್ನು ಉಪಮೆಗಳು, ಅಲಂಕಾರಗಳು, ವಿಮರ್ಶೆಗಳು ನನಗೆ ಒಗ್ಗುವುದಿಲ್ಲ ಎನ್ನುವ ಹಿಂಜರಿಕೆಯೂ ಇದೆ. ಕಥೆ, ಕವನಗಳನ್ನು ಬರೆಯಬೇಕಾದರೆ, ಬದುಕಿನ ಬಲು ಸೂಕ್ಷ್ಮ ನಡವಳಿಕೆಗಳನ್ನೂ ಗಮನಿಸುವ, ಬಳಸಿಕೊಳ್ಳುವ (ಇವನ್ನು ಪ್ರತಿಮೆಗಳು ಎನ್ನುತ್ತಾರಂತೆ!) ಸೆನ್ಸಿಟಿವ್ ಮನಸ್ಸು ಇರಬೇಕು. ಅದು ನನಗಿದೆ ಎನ್ನುವ ಬಗ್ಗೆ ಸಂದೇಹವಿರುವುದರಿಂದ ನಾನು ಕಥೆ ಬರೆಯಲಿಲ್ಲ. ಕವನವನ್ನಂತೂ ಬರೆಯುವ ಗೋಜಿಗೆ ಹೋಗುವುದೇ ಇಲ್ಲ. ಹಿಂದೊಮ್ಮೆ ಗೆಳತಿ ಶೈಲಜಾ ನಿನಗೆ ಕವನ ಓದಲೇ ಬರುವುದಿಲ್ಲ ಇನ್ನು ಕವಿತೆ ಏಕೆ ಬರೆಯಬೇಕೆಂದಿದ್ದೀಯ ಎಂದಿದ್ದಳು. ನಿಜವೇ.
ಒಟ್ಟಾರೆ, ನಿತ್ಯ ಮನಸ್ಸಿಗೆ ತೋಚಿದ್ದನ್ನು ಬರೆದರಾಯಿತು ಎಂದು ಕೊಂಡೆ. ಕೆಲವರು ಬ್ಲಾಗ್ ಅನ್ನು ತಮ್ಮ ಸೈಬರ್ ದಿನಚರಿ ಎಂದು ವರ್ಣಿಸಿದ್ದಾರೆ. ಆ ದಿನದ ಆಗುಹೋಗುಗಳ ಮೇಲೆ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಸಾರ್ವಜನಿಕವಾಗಿ ದಾಖಲಿಸುವುದನ್ನೇ ಬ್ಲಾಗ್ ಎಂದು ಹೇಳುವವರೂ ಇದ್ದಾರೆ. ಅಡುಗೆಯ ಬಗ್ಗೆ ಬ್ಲಾಗ್ ಇದೆ. ವಿಜ್ಞಾನದ ಬಗ್ಗೆಯೂ ಬ್ಲಾಗ್ ಇದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳಲ್ಲಿನ ಅವೈಜ್ಞಾನಿಕತೆಯನ್ನು ಬಯಲಿಗೆಳೆಯುವ ಬ್ಲಾಗ್‌ಗಳೂ ಇವೆ. ತಾನು ಆ ದಿನ ಏನು ಮಾಡಿದೆ ಎಂದು ಅಮೆರಿಕೆಯ ಬೀದಿಬಸವನೊಬ್ಬ (ಹೋಮ್‌ಲೆಸ್) ಹತ್ತಾರು ವರುಷಗಳಿಂದ ಬ್ಲಾಗಿಸಿದ ದಾಖಲೆಯೂ ಇದೆ. ನಾನು ಇದನ್ನು ದಿನಚರಿ ಎಂದು ಆರಂಭಿಸಲೇ ಎಂದು ಕೊಂಡೆ. ಆದರೆ ದಿನಚರಿ ಬರೆದು ಅಭ್ಯಾಸವೇ ಇಲ್ಲ.ಪ್ರತಿ ವರುಷವೂ ರೂಢಿಯಂತೆ ಡಿಸೆಂಬರ್ ಕೊನೆಯಲ್ಲಿ ದಿನಚರಿ ಪುಸ್ತಕ ಕೊಳ್ಳುವುದಷ್ಟೆ ಸತ್ಯ. ಅದರಲ್ಲಿ ಒಂದೆರಡು ದಿನ ಯಾರದ್ದಾದರೂ ವಿಳಾಸ ದಾಖಲಾಗುತ್ತದೆ. ಅನಂತರ, ಅದು ಹಾಗೇ ಕೊಳೆಯುತ್ತದೆ. ಮಿತ್ರರು ಪ್ರೀತಿಯೊಂದ ಕೊಡುವ ದಿನಚರಿಗಳ ಕಥೆಯೂ ಹೀಗೆಯೇ. ಕಛೇರಿಯಲ್ಲಿಯೂ ದಿನಚರಿ ಬರೆಯುವುದಿಲ್ಲ. ದಿನಚರಿಗಳನ್ನು ಸರ್ಕಾರಿ ವೆಚ್ಚದಲ್ಲಿ ಕೊಂಡು ನೀಡುವುದನ್ನು ಕೇಂದ್ರ ಸರಕಾರ ನಿರ್ಬಂಧಿಸಿರುವುದು ನನ್ನಂತಹ ದಿನಚರಿ-ದ್ವೇಷಿಗಳಿಗೆ ಅನುಕೂಲಿಯಾಗಿದೆ. ಕೋಟ್ಯಂತರ ರೂಪಾಯಿಗಳ ದಗಲ್‌ಬಾಜಿ ಮಾಡಿದವರೆಲ್ಲರ ಬಳಿಯೂ ಡೈರಿಗಳು ಸಿಕ್ಕಿದ್ದಾಗಿ ಪೋಲೀಸರು ಹೇಳಿಕೆ ನೀಡುವುದನ್ನು ನೋಡಿದರೆ ಅಚ್ಚರಿ ಎನ್ನಿಸುತ್ತದೆಯಷ್ಟೆ.
ಹೀಗೆ ದಿನಚರಿಗೆ ಪರ್ಯಾಯವಾಗಿ ಬ್ಲಾಗ್ ಆರಂಭಿಸಿದವ, ನಿನ್ನೆಯಷ್ಟೆ ಮಂಜುನಾಥರ ಬಳಿ ಇದು ಇನ್ನು ಎಷ್ಟು ದಿನ ಉಳಿಯುವ ಉತ್ಸಾಹವೋ ಎಂದು ಕಳವಳಿಸಿದ್ದೆ. ನನ್ನ ಕಳವಳವನ್ನೇ ಬೆಂಬಲಿಸುವ ಸುದ್ದಿ ಈವತ್ತು ಟೈಂಸ್ ಆಫ್ ಇಂಡಿಯಾ ಪ್ರಕಟಿಸಿದೆ. ವಿಶ್ವಾದ್ಯಂತ ಈಗ ಸುಮಾರು ೨೦ ಕೋಟಿ ಬ್ಲಾಗ್‌ಗಳು ಶವವಾಗಿವೆಯಂತೆ. ಯಾರೋ, ಎಂದೋ ಆರಂಭಿಸಿದವರುಗಳು ಈ ಬ್ಲಾಗ್‌ಗಳಲ್ಲಿ ಬರೆಯವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಬ್ಲಾಗ್ ಎನ್ನುವ ಗುಳ್ಳೆ ಒಡೆಯಲಿದೆ ಎಂದು ಟೋನಿ ಅಲೆನ್ ಮಿಲ್ಸ್ ಲೇಖನ ಬರೆದಿದ್ದಾರೆ. ಹೊಸ ಬ್ಲಾಗ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆಯಂತೆ. ಇಂತಹ ಬ್ಲಾಗ್ ಶವಗಳು (Ghost Blogs) ಕೊಳೆಯುವುದಿಲ್ಲ. ಗೂಗಲ್‌ನಲ್ಲೋ, ಬ್ಲಾಗರ್‌ನಲ್ಲೋ ಹುಡುಕಿದರೆ ಅವುಗಳು ಈಗಲೂ ಕಾಣಿಸಿಕೊಳ್ಳಬಹುದು. ಆದರೆ, ಅವುಗಳಲ್ಲಿ ಜೀವವಿಲ್ಲ. ಹೊಸ ಚಿಂತನೆಗಳಿಲ್ಲ.
ಇದನ್ನು ಓದಿದಾಗ ಈ ಬ್ಲಾಗ್‌ನ ಗತಿಯೂ ಒಂದು ದಿನ ಹೀಗೇ ಆಗಬಹುದೇ ಎನ್ನುವ ಆತಂಕ ಕಾಡಿದೆ. ಮೇಲೇರಿದ್ದು ಕೆಳಗಿಳಿಯಬೇಕಾದದ್ದು ನಿಸರ್ಗ ನಿಯಮ. ಬ್ಲಾಗ್ ಕ್ರಾಂತಿಯೂ ಹಾಗೆಯೇ ಇರಬೇಕು. ಈ ಹಿಂದೆ ಡಾಟ್‌ಕಾಮ್‌ಗಳ ಸುಗ್ಗಿ ಬಂದು, ಅನಂತರ ಬರವುಂಟಾಗಿದ್ದು ತಿಳಿದಿದೆಯಲ್ಲವೇ? ಎರಡು ವರುಷಗಳ ಹಿಂದೆ ಪ್ರತಿದಿನವೂ ೧೦೦,೦೦೦ ಹೊಸ ಬ್ಲಾಗುಗಳು ಜನ್ಮತಾಳುತ್ತಿದ್ದುವಂತೆ. ಈಗ ಇದು ಕಡಿಮೆಯಾಗಿದೆ. ಹಾಗೆಂದು ಹೊಸ ಬ್ಲಾಗ್ ಬರುವುದೇ ಇಲ್ಲವೆಂತಲ್ಲ. ನನ್ನಂತಹ ನಿಧಾನದ್ರೋಹಿಗಳು ಎಲ್ಲಿಯಾದರೂ ಒಂದು ಹೊಸ ಬ್ಲಾಗ್ ಆರಂಭಿಸುತ್ತಾರೆ. ಆದರೆ ಈ ಉತ್ಸಾಹ ಕ್ರಮೇಣ ಕುಗ್ಗುತ್ತ ಹೋಗುತ್ತದೆ ಎನ್ನುವುದು ಅಲೆನ್ ಮಿಲ್ಸ್ ಅಭಿಪ್ರಾಯ.
ಬ್ಲಾಗ್‌ಗಳ ಈ ಗತಿಗೆ ಕೆಲವರು ಹೇಳುವ ಮಾತು : ಇವುಗಳಲ್ಲಿ ಇರುವುದೆಲ್ಲವೂ ಅನಗತ್ಯ ಮಾಹಿತಿ. ಈ ಬ್ಲಾಗ್‌ಗೂ ಅದೇ ನಾಮ ಪಟ್ಟಿ ದೊರಕೀತೇ?
ಬ್ಲಾಗ್‌ಗಳನ್ನು ನಾವು ಬರೆಯುವುದೇಕೆ? ಈ ಬ್ಲಾಗ್ ಬರೆದ ಅನಂತರ ಈ ವಿಷಯದ ಬಗ್ಗೆ ಶ್ರೀ ಪವನಜರು ಸುಧಾ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಎಂ. ಎಸ್. ಶ್ರೀರಾಮ್ ರವರ ವಿವರಣೆ ನೋಡಿದೆ. ಲೋಕಾನುಭವ ಎಲ್ಲರಿಗೂ ಒಂದೇ ಎನ್ನಿಸಿತು.

Monday, March 26, 2007
ರಾಮನವಮಿ
ನಾಳೆ ರಾಮನವಮಿ. ಬೇಲ-ಬೆಲ್ಲದ ರುಚಿ, ರುಚಿ ಪಾನಕ. ಕೋಸಂಬರಿ ಔತಣ. ನಾಲ್ಕು ವರುಷಗಳ ಹಿಂದೆ ಇದೇ ಸಂದರ್ಭದಲ್ಲಿ ನಮ್ಮಕರ್ನಾಟಕ ಡಾಟ್ ಕಾಂ ಗಾಗಿ ಬರೆದ ಲೇಖನಗಳು ನೆನಪಿಗೆ ಬರುತ್ತವೆ. ರಾಮನವಮಿಯ ಪಾನಕವೇ ವಸ್ತುವಾಗಿ, ನಮ್ಮ ಸಂಸ್ಕೃತಿಗೂ, ಪರಿಸರಕ್ಕೂ ಇರುವ ಗಾಢ ತಳುಕಿನ ಬಗ್ಗೆ ಚಿಂತನೆಗೆ ದೂಡಿತ್ತು. ನಿಮ್ಮೊಡನೆ ಅದನ್ನು ಹಂಚಿಕೊಳ್ಳುವ ಬಯಕೆ.
Subscribe to:
Posts (Atom)