Thursday, April 21, 2011
ದೇವರ ವ್ಯಾಪಾರ 2
ತಿರುಪತಿಯ ವ್ಯಾಪಾರದ ಬಗ್ಗೆ ಇನ್ನೊಂದು ಮಾತು. ಮೊನ್ನೆ ಇಸ್ರೋದ ಹೊಸ ಉಪಗ್ರಹ ಆಕಾಶವೆರಿದ್ದು ಗೊತ್ತಲ್ಲ! ಅದರ ಫಲ ಇಸ್ರೋಗೆ ಸಲ್ಲಬೇಕೋ, ತಿರುಪತಿಯ ತಿಮ್ಮಪ್ಪನಿಗೆ ಸಲ್ಲಬೇಕೋ ಗೊಂದಲವಾಗಿದೆ. ಏಕೆಂದರೆ ಈಟಿವಿ ವರದಿ ಮಾಡಿದಂತೆ ಇಸ್ರೋದ ಮುಖ್ಯಸ್ತರು ಉಪಗ್ರಹದ ಉಡಾವಣೆಗೆ ಮೊದಲು ತಿರುಪತಿಯ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದರು. ಉಪಗ್ರಹ ಉಡಾವಣೆ ಸುಗಮವಾಗಿ ಸಾಗಲಿ ಅಂತ. ಇತ್ತೀಚಿಗೆ ದೇಶದ ಪ್ರತಿಷ್ಟಿತ ಸಂಸ್ಥೆಯಾದ ಇಸ್ರೋಗೂ ಗರ ಬಡಿದಿದೆ. ಅಂತರಿಕ್ಸ್ ಹಾಗೂ ದೇವಾಸ್ ಸಂಸ್ಥೆಗಳ ಗುತ್ತಿಗೆ ವ್ಯವಹಾರ ಹಾಗೂ ಕಳೆದ ಎರಡು ಉಡಾವಣೆಗಳ ವಿಫಲತೆ ಮುಂದೆ ಈ ಸಂಸ್ಥೆಯ ಹಣಕಾಸು ಬೇಡಿಕೆಗಳಿಗೆ ಅಡ್ಡಿಯಾಗಬಹುದು. ಮತ್ತೊಂದು ಉಡಾವಣೆಯು ಸೋತಿದ್ದಾರೆ ಕಷ್ಟವೇ ಆಗುತ್ತಿತ್ತು. ತಿರುಪತಿಯ ತಿಮ್ಮಪ್ಪ ಸಂಕಟ ಹರನಲ್ಲವೇ? ಅದಕ್ಕೆ ಬಹುಷಃ ಇಸ್ರೋದ ಅಧಿಕಾರಿಗಳು ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನಿಸುತ್ತದೆ. ವಿಜ್ಞಾನ ಹಾಗೂ ವಿಶ್ವಾಸಗಳ ಗೊಂದಲಕ್ಕೆ ಇದೂ ಒಂದು ಉದಾಹರಣೆ. ಆದರೂ, ಇಸ್ರೋ ಗಾಬರಿಯಾಗಬೇಕಿರಲಿಲ್ಲ. ಸರಕಾರ ಹಣ ಕೊಡದಿದ್ದರೂ, ಹತ್ತು ಉಪಗ್ರಹಗಳ ಉಡಾವಣೆಗೆ ಅವಶ್ಯಕವಾದ ಹಣವನ್ನು ತಿರುಪತಿಯ ಯು ಎಸ್ ಪಿ ಆಗಿತ್ತುಕೊಂಡು ಲಾಭ ಪಡೆಯುವುದರಲ್ಲಿ ಧಾರ್ಮಿಕ ಸಂಸ್ಥೆಗಳು ಸಿದ್ಧ ಹಸ್ತ ಅಲ್ಲವೇ? ಇಸ್ರೋ ಸರಕಾರವನ್ನು ಬೇಡುವುದಕ್ಕಿಂತ ದೇವರಲ್ಲಿ ಬೇಡಿದ್ದೆ ಸರಿಯೇನೋ ಅಲ್ಲವೇ? :)
Subscribe to:
Post Comments (Atom)
1 comment:
ನಮ್ಮಲ್ಲಿ ಒಂದು ಗಾದೆಯಿದೆ "ಶಕುನ ಹೇಳುವ ಹಲ್ಲಿ ಕಲಗಚ್ಚಿನ ಬಾನಿಗೆ ಬಿತ್ತಂತೆ ಅಂತ"
ದೀಪದಡಿಯಲ್ಲಿ ನೆರಳು. ಆದರೂ ತಾರ್ಕಿಕತೆಯನ್ನು ಎತ್ತಿಹಿಡಿಯುವ ವಿಜ್ನ್ಞಾನ ಸಂಸ್ಥೆಯ ಅಧ್ವರ್ಯುಗಳು ತಿಮ್ಮಪ್ಪನನ್ನು ಬೇಡಿದ್ದರಲ್ಲಿ ಅತಿಶಯವೇನೂ ಇಲ್ಲವೆನ್ನಿಸುತ್ತದೆ, ಏಕೆಂದರೆ ಬೇಡಿದ್ದನ್ನು ನೀಡಬಲ್ಲ ಸರ್ವಶಕ್ತ, ಸರ್ವಕಾರವಾದ ಸರ್ಕಾರದ ಅಧ್ವರ್ಯುಗಳು ಸ್ವತಃ ಬೇಡಿಕೆ ಬುಟ್ಟಿ ಹಿಡಿದು ಚಂಡೀ ಹೋಮ ಮಾಡುವುದು, ಬಾಬಾನ ಕಾಲಿಗೆ ಬೀಳುವುದು, ವಿಧಾನಸೌಧದ ಮುಂದೆ ಮಾಟ ಮಾಡಿಸಿ ಹಾಕುವುದು ಸಾಮಾನ್ಯವಾಗಿದೆಯಲ್ಲವೇ? ಹಿರಿಯಕ್ಕನ ಚಾಳಿ...
Post a Comment